ನಮ್ಮ ಮಿಷನ್
ಪ್ರಾದೇಶಿಕ ಅಭಿವೃದ್ಧಿಯಲ್ಲಿ ತ್ವರಿತಗತಿಯ ಬೆಳವಣಿಗೆ ಮತ್ತು ಸಮತೋಲನವನ್ನು ಸಾಮಾಜಿಕ ನ್ಯಾಯ ಬದ್ದತೆಗೆ ಜೊತೆಗೆ ಕಲ್ಯಾಣ ಕರ್ನಾಟಕ ಪ್ರಾದೇಶ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಸಾಧನೆಪಡಿಸುವುದೇ ಕ.ಕ.ಪ್ರ.ಆ.ಮ: ಮಿಷನ್ ಮೂಲ ಉದ್ದೇಶ. ಇದರ ಧ್ಯೇಯವೆನೆಂದರೆ ಮೈಕ್ರೋ ಮತ್ತು ಮ್ಯಾಕ್ರೋ ಯೊಜನೆಗಳನ್ನು ಅಳವಡಿಸುವುದರಿಂದ ಈ ಭಾಗದ ಐತಿಹಾಸಿಕ ಅಂತರವನ್ನು ತುಂಬಬಹುದಾಗಿದೆ. ಅದು ಅಲ್ಲದೇ ಅಭಿವೃದ್ಧಿ ಯನ್ನು ಅವಲಂಬನೆ ಪ್ರಾತ್ಯವಲಂಬನೆ ಮೇಲೆ ಸಾಧಿಸಬಹುದಾಗಿದೆ. ಊಏಖಆಃ ಯೋಜನೆಗಳನ್ನು ತಯಾರಿಸುವಾಗ ಡಾ: ಡಿ ಎಂ ನಂಜುಂಡಪ್ಪ ಕಮಿಟಿಯ ವರದಿಯಲ್ಲಿನ ಅಂಶಗಳನ್ನು ಆಧರಿಸಿ ಅಆIಯನ್ನು ಮೂಲವಾಗಿಟ್ಟಿಕೊಂಡು ತಾಲ್ಲೂಕವನ್ನು ಒಂದು ಘಟಕವನ್ನಾಗಿ ಪರಿಗಣಿಸಲಾಗಿದೆ. ಮೈಕ್ರೋ ಯೋಜನೆಯ ಅಡಿಯಲ್ಲಿ ಒಟ್ಟಾರೆ ಅನುದಾನದ ಶೇಕಡಾ 60% ಪ್ರತಿಶತವನ್ನು ಕ್ಲೀಷಟಕರವಾದ ಮೂಲಭೂತ ಸೌಕರ್ಯಗಳನ್ನು ಸಂಸ್ಥಾಥಿಕ ವಲಯದ ಅಡಿಯಲ್ಲಿನ ಐತಿಹಾಸಿಕ ಅಂತರವನ್ನು ಹೋಗಲಾಡಿಸಲು ಒದಗಿಸುವುದು. ಮ್ಯಾಕ್ರೋ ಯೋಜನೆಯ ಅಡಿಯಲ್ಲಿ ಒಟ್ಟಾರೆ ಅನುದಾನದ ಶೇಕಡಾ 40% ಪ್ರತಿಶತವನ್ನು ಒದಗಿಸುವ ಕುರಿತು ಕ್ರಮ ಜರುಗಿಸಲಾಗುತ್ತಿದೆ ಮತ್ತು ವಲಯ ವಾರು ಅಂಚಿಕೆಯನ್ನು ಮಾಡಲಾಗುತ್ತಿದೆ. ಅಂದರೆ ಮ್ಯಾಕ್ರೋ ಯೋಜನೆಯ ಅಡಿಯಲ್ಲಿ ಐತಿಹಾಸಿಕ ಅಂತರವನ್ನು ತುಂಬಲು ಸ್ಕೇಲ ಅಥವಾ ವ್ಯಾಪ್ತಿ ಅಥವಾ ಎರಡು ಕೂಡಿಕೊಳ್ಳುವ ಅಂಶಗಳನ್ನು ಗುರಿತಿಸಲಾಗಿದೆ.